ಅಭಿಪ್ರಾಯ / ಸಲಹೆಗಳು

6 ಗುರುಚೇತನ - ಶಿಕ್ಷಕರ ವೃತ್ತಿಪರ ಅಭಿವೃದ್ಧಿಗಾಗಿ

ಗುರುಚೇತನ - ಶಿಕ್ಷಕರ ವೃತ್ತಿಪರ ಅಭಿವೃದ್ಧಿಗಾಗಿ

ಹಿನ್ನೆಲೆ:  

ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗಿ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಬದಲಾವಣೆಗಳನ್ನು ತರಬೇಕಿದೆ. ಶಿಕ್ಷಕರ ಅಭಿವೃದ್ಧಿಯನ್ನು ಅಲ್ಪಕಾಲೀನ ವಾರ್ಷಿಕ ಯೋಜನೆಗಳಿಂದ ಸಾಕಾರಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೀರ್ಘಾವಧಿಯ ಯೋಜನೆಯಾದ ಗುರುಚೇತನ ಕಾರ್ಯಕ್ರಮವನ್ನು ೨೦೧೭-೧೮ ನೇ ಸಾಲಿನಿಂದ ಜಾರಿಗೆ ತರಲಾಗಿದೆ. ಈ ಕಾರ್ಯಕ್ರಮವು ೨೦೧೭ರ ಸೆಪ್ಟೆಂಬರ್ ೦೫ ನೇ ತಾರೀಖಿನಂದು ಉದ್ಘಾಟನೆಯಾಗಿರುತ್ತದೆ.

ಉದ್ದೇಶಗಳು:

 • ಶಿಕ್ಷಕರನ್ನು ಚಿಂತನಶೀಲ ಅಭ್ಯಾಸಿಗರನ್ನಾಗಿ (ಖeಜಿಟeಛಿಣive Pಡಿಚಿಛಿಣiಣioಟಿeಡಿ) ಮಾಡುವುದು.
 • ಶಿಕ್ಷಕರು ಸ್ವ-ಪ್ರೇರಣೆಯಿಂದ ವೃತ್ತಿಪರ ಅಭಿವೃಧ್ಧಿಯಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸುವುದು.
 • ಶಾಲಾ ಶಿಕ್ಷಣದ ಸಂದರ್ಭದಲ್ಲಿ ಮಕ್ಕಳ ಸ್ವಕಲಿಕೆಯ ಅವಕಾಶಗಳನ್ನು ಅರ್ಥೈಸಲು ಮತ್ತು ಅನುಕೂಲಿಸಲು ಸ್ವಾಯತ್ತ & ಸಮರ್ಥ ಶಿಕ್ಷಕರನ್ನು ರೂಪಿಸುವುದು.
 • ಚಿತ್ರದುರ್ಗ ಜಿಲ್ಲೆಯ ೫೭೩೦ ಪ್ರಾಥಮಿಕ ಶಾಲಾ ಶಿಕ್ಷಕರು ಟಿ.ಟಿ.ಎಂ.ಎಸ್‌ನಲ್ಲಿ ನೊಂದಣಿ ಮಾಡಿಕೊಂಡು ಲಭ್ಯವಿರುವ ಮಾಡ್ಯೂಲ್‌ಗಳ ಆಯ್ಕೆ ಮಾಡಿಕೊಂಡಿರುತ್ತಾರೆ.  ೨೦೧೭-೧೮ನೇ ಸಾಲಿನಲ್ಲಿ ೧ ರಿಂದ ೮ ನೇ ತರಗತಿಗಳಿಗೆ ಬೋಧಿಸುವ ೨೭೫೧ ಸರ್ಕಾರಿ ಶಾಲಾ ಶಿಕ್ಷಕರುಗಳಿಗೆ ಕಲಿಕೆಯನ್ನು ಅನುಕೂಲಿಸುವ ಗುರುಚೇತನ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ನಲಿ ಕಲಿ ಮತ್ತು ಶೈಕ್ಷಣಿಕ ದೃಷ್ಟಿಕೋನ ವಿಷಯಗಳಲ್ಲಿ ತರಬೇತಿ ಮಾಡ್ಯೂಲ್‌ಗಳನ್ನು  ಸಿದ್ಧಪಡಿಸಲಾಗಿದೆ.

೨೦೧೮-೧೯ ನೇ ಸಾಲಿನಲ್ಲಿ ಜಿಲ್ಲೆಯ ಆಯ್ದ ಶಿಕ್ಷಕರಿಗೆ ಇಂಗ್ಲೀಷ್ ಭಾಷಾ ಸಬಲೀಕರಣ ತರಬೇತಿಯನ್ನು ನೀಡಲಾಯಿತು. ತರಬೇತಿಯು ೩೦ ದಿನಗಳ ಅವಧಿಯಾಗಿದ್ದು, ಜಿಲ್ಲೆಯ ೦೬ ತಾಲ್ಲೂಕಿನ ಆಯ್ದ ಶಿಕ್ಷಕರು ಭಾಗವಹಿಸಿದ್ದರು. ತರಬೇತಿಯಲ್ಲಿ ದ್ವಿತೀಯ ಭಾಷೆಗೆ ಸಂಬAಧಿಸಿದAತೆ ಅಗತ್ಯವೆನಿಸಿದ Phoಟಿeಣiಛಿs, ಉಡಿಚಿmmeಡಿ, ಗಿoಛಿಚಿbuಟಚಿಡಿಥಿ, ಖeಚಿಜiಟಿg, Wಡಿiಣiಟಿg, Sಠಿoಞeಟಿ ಇಟಿgಟish, ಐeಚಿಡಿಟಿiಟಿg sಠಿeಟಟs, Pಡಿoಜಿessioಟಿಚಿಟ ಆeveಟoಠಿmeಟಿಣ ಕ್ಷೇತ್ರಗಳನ್ನೊಳಗೊಂಡ ತರಬೇತಿಯನ್ನು ಯಶಸ್ವಿಯಾಗಿ ನೀಡಲಾಯಿತು.

ತರಬೇತಿಯ ವಿಷಯಾಂಶಗಳು, ಬೆಂಗಳೂರು ವತಿಯಿಂದ ನಿರ್ದೇಶಿಸಲ್ಪಟ್ಟಿದ್ದು, ತುಂಬಾ ಉಪಯುಕ್ತವಾಗಿವೆ. ಈ ತರಬೇತಿಯನ್ನು ಪಡೆದುಕೊಂಡ ಶಿಕ್ಷಕರು ಶಾಲಾ ಹಂತದಲ್ಲಿ ಯಶಸ್ವಿಯಾಗಿ ತಾವುಗಳು ತರಬೇತಿಯಲ್ಲಿ ಕಲಿತುಕೊಂಡ ವಿಷಯಾಂಶಗಳನ್ನು ತಮ್ಮ ಬೋಧನೆಯಲ್ಲಿ ಸಮ್ಮಿಳಿತಗೊಳಿಸಿಕೊಂಡು ಚಟುವಟಿಕೆ ಆಧಾರಿತ ಬೋಧನೆಯನ್ನು ಮಾಡುತ್ತಿರುವುದು ಶಾಲಾ ಭೇಟಿಯ ಸಂದರ್ಭದಲ್ಲಿ ಗಮನಿಸಲಾಗಿದೆ.

ಬುನಾದಿ ತರಬೇತಿ

ಶಿಕ್ಷಕರ ಶಿಕ್ಷಣದ – ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ೨೦೦೯ರ ವಿವಿಧ ಅಧ್ಯಾಯಗಳಲ್ಲಿ ಶಿಕ್ಷಕರ ಪಾತ್ರವನ್ನು ಕಲ್ಪಿಸಿಕೊಳ್ಳುತ್ತಾ, ಹೀಗೆ ಹೇಳುತ್ತಾರೆ “ನಮ್ಮ ದೇಶಕ್ಕೆ ಶಿಕ್ಷಕರು ಬೇಕು, ಅವರು ಹೇಗಿರಬೇಕೆಂದರೆ ಮಕ್ಕಳ ಜೊತೆಗೆ ಇರಲು ಇಷ್ಟಪಡಬೇಕು. ಮಕ್ಕಳನ್ನು ಅರ್ಥಮಾಡಿಕೊಳ್ಳುವಂತಿರಬೇಕು ಹಾಗೂ ವಿವಿಧ ಆಟ, ಯೋಜನಾ ಕಾರ್ಯಗಳು ಹಾಗೂ ಬೋಧನಾ ವಿಧಾನಗಳ ಮೂಲಕ ಮಕ್ಕಳ ಕಲಿಕೆ ಸಹಕಾರಿಯಾಗಬೇಕು”. ನಮ್ಮ ದೇಶದ ಪ್ರತಿಯೊಬ್ಬ ಶಿಕ್ಷಕರು ಈ ರೀತಿಯಾಗಬೇಕೆಂದು, ಅದು ಬಯಸುತ್ತದೆ. ಅಲ್ಲದೇ ಶಿಕ್ಷಕನ ಸಾಮರ್ಥ್ಯ, ಪಡೆದಿರುವ ಶಿಕ್ಷಣ ಮತ್ತು ತರಬೇತಿ ಉತ್ತಮವಾಗಿರಬೇಕು. ಶಿಕ್ಷಕನ ಮೂಲಭೂತವಾದ ಗುಣಗಳ ಜೊತೆಗೆ ವೃತ್ತಿಪರವಾದ ಜ್ಞಾನ, ಮಕ್ಕಳನ್ನು ಪ್ರೀತಿಸುವ ಗುಣ, ವೈಯಕ್ತಿಕ ಗುಣಗಳು, ಬುದ್ಧಿಶಕ್ತಿ, ಒಳ್ಳೆಯ ಮಾತುಗಾರಿಕೆ, ದೈಹಿಕ ಮತ್ತು ಮಾನಸಿಕ ಆರೋಗ್ಯ, ಕರುಣೆ, ಜನಸಾಮಾನ್ಯರೊಡನೆ ಹೊಂದಾಣಿಕೆ, ಹಾಸ್ಯ ಪ್ರವೃತ್ತಿ, ತಾಳ್ಮೆ, ಕರ್ತವ್ಯ ನಿಷ್ಟಗಳಿರಬೇಕು. ಬೋಧನಾ ಉದ್ದೇಶ, ವಿವಿಧ ರೀತಿಯ ಬೋಧನಾ ವಿಧಾನಗಳನ್ನು ತಿಳಿದರಬೇಕು. ಮತ್ತು ಮನೋವಿಜ್ಞಾನದ ತಿಳುವಳಿಕೆ, ವಿವೇಚನಾ ಶಕ್ತಿಯನ್ನು ಹೊಂದಿದ್ದು, ಬೋಧಿಸುವ ವಿಷಯಗಳಲ್ಲಿ ಆಳವಾದ ಜ್ಞಾನವನ್ನು ಹೊಂದಿರಬೇಕು. ಜೀವನ ಪರ್ಯಂತ ವಿದ್ಯಾರ್ಥಿಯಾಗಿರಬೇಕು.

೨೦೧೮ ರಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ನೇಮಕವಾದ ಶಿಕ್ಷಕರಿಗೆ ೧೦ ದಿನಗಳ ಬುನಾದಿ ತರಬೇತಿಯನ್ನು ಹಮ್ಮಿಕೊಂಡು ಈ ಕೆಳಕಂಡ ಅಂಶಗಳ ಬಗ್ಗೆ ತಿಳಿಸಲಾಯಿತು.

 • ಶಿಕ್ಷಕರ ಕರ್ತವ್ಯ, ಶಾಲಾಡಳಿತದ ಬಗ್ಗೆ ಸಮಗ್ರ ಚಿತ್ರಣ.
 • ಪ್ರಜಾಪ್ರಭುತ್ವದ ಆಶಯಗಳಾದ ಸಮಾನತೆ, ನ್ಯಾಯ, ಸ್ವಾತಂತ್ರö್ಯ, ಜಾತ್ಯಾತೀತತೆ, ಘನತೆ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವ್ಯಕ್ತಿಯ ಬದ್ಧತೆ ಹಾಗೂ ಸಾಂವಿಧಾನಿಕ ಚೌಕಟ್ಟಿನಲ್ಲಿ ಸಮಾಜ ನಿರ್ಮಾಣ,
 • ಕುಟುಂಬ, ಸಮುದಾಯ, ಸರ್ಕಾರದ ಆರ್ಥಿಕ, ರಾಜಕೀಯ ಹಾಗೂ ನ್ಯಾಂiÀiದ ಪರಿಕಲ್ಪನೆಗಳ ಬಗ್ಗೆ ಸ್ಪಷ್ಟ ಪರಿಕಲ್ಪನೆ, ರಾಷ್ಟಿçÃಯ ಭಾವೈಕ್ಯತೆ ಹಾಗೂ ಸರ್ವಧರ್ಮ ಸಹನಶೀಲತೆ, ರಾಷ್ಟಿçÃಯ ಐತಿಹಾಸಿಕ ಪರಂಪರೆ, ಸಂಪ್ರದಾಯ ಹಾಗೂ ಭೌಗೋಳಿಕ ಅಂಶಗಳ ಬಗ್ಗೆ ಸ್ಪಷ್ಟ ಪರಿಕಲ್ಪನೆ.
 • ಪ್ರತಿಯೊಂದು ವಿಚಾರಗಳನ್ನು ವೈಜ್ಞಾನಿಕ ಮನೋಭಾವನೆ ಹಾಗೂ ತಾರ್ಕಿಕವಾಗಿ ಆಲೋಚಿಸುವ ಸಾಮರ್ಥ್ಯ.
 • ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ, ವೈಯಕ್ತಿಕ ಸ್ವಚ್ಛತೆ ಹಾಗೂ ಪ್ರಾಣಿ, ಪಕ್ಷಿ ಇವುಗಳ ಬಗ್ಗೆ ಅನುಕಂಪ ಹಾಗೂ ಅನುಭೂತಿ ಹೊಂದಿರುವುದು.
 • ಎನ್.ಸಿ.ಎಫ್-೨೦೦೫, ಆರ್.ಟಿ.ಇ.-೨೦೦೯, ಮಕ್ಕಳ ಹಕ್ಕುಗಳು, ಕಲೆ, ಕ್ರೀಡೆ ಹಾಗೂ ವ್ಯಕ್ತಿಗತ ಹವ್ಯಾಸಗಳು.
 • ರಚನಾತ್ಮಕ, ಕ್ರಿಯಾತ್ಮಕ ಅಂತರ್ಗತ, ಸುರುಳಿಯಾಕಾರದ ಬೋಧನಾ ವಿಧಾನಗಳ ಬಗ್ಗೆ ವಿಸ್ತೃತವಾದ ಪರಿಕಲ್ಪನೆಗಳ ವಿಚಾರಗಳ ಅರಿವು. 

ಇತ್ತೀಚಿನ ನವೀಕರಣ​ : 14-07-2021 12:08 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಚಿತ್ರದುರ್ಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080