ಅಭಿಪ್ರಾಯ / ಸಲಹೆಗಳು

ಪ್ರೇರಣಾ ತರಬೇತಿ

ಪ್ರೇರಣಾ ತರಬೇತಿ

ಎನ್‌ ಸಿ ಎಫ್ – ೨೦೦೫ ಜ್ಞಾನವನ್ನು ಕಟ್ಟಿಕೊಳ್ಳಲು ಮತ್ತು ಸೃಜನಶೀಲತೆಯನ್ನು ಪೋಷಿಸಲು ವಿದ್ಯಾರ್ಥಿಗಳ ತೊಡಗುವಿಕೆ ಮುಖ್ಯವಾದದ್ದು ಎನ್ನುವುದನ್ನು ವಿವರಿಸುತ್ತದೆ. ಪಠ್ಯಕ್ರಮ ಆಚರಣೆಗಳಲ್ಲಿ ಮಕ್ಕಳ ಆಲೋಚನೆಗಳು, ಕುತೂಹಲ ಮತ್ತು ಪ್ರಶ್ನೆಗಳಿಗೆ ಧ್ವನಿಯೆತ್ತಲು ಸಮರ್ಪಕ ಅವಕಾಶ ಒದಗಿಸುವಂತೆ ಪ್ರಸ್ತಾಪಿಸಿದೆ. ಶಾಲೆಗಳಲ್ಲಿ ಭಾಷೆ ಮತ್ತು ಗಣಿತದ ಕಲಿಕೆಯ ಕುರಿತು ರಾಷ್ಟಿçÃಯ ಪಠ್ಯಕ್ರಮ ಚೌಕಟ್ಟು – ೨೦೦೫ ರಲ್ಲಿ ಭಾಷಾ ಕೌಶಲಗಳು - ಶಾಲಾ ವಿಷಯಗಳು ಮತ್ತು ಶಿಸ್ತಿನ ಚೌಕಟ್ಟಿನಾಚೆಗೆ ಮಾತನಾಡುವುದು ಮತ್ತು ಆಲಿಸುವುದು, ಓದುವುದು ಮತ್ತು ಬರೆಯುವುದು – ಮೂಲ ಶಿಕ್ಷಣದ ತರಗತಿಗಳಿಂದ ಪ್ರೌಢ ಶಿಕ್ಷಣದ ತರಗತಿಗಳವರೆಗೆ ಮಕ್ಕಳ ಜ್ಞಾನದ ಕಟ್ಟಿಕೊಳ್ಳುವಿಕೆಯಲ್ಲಿ ಭಾಷೆಯ ಅಡಿಪಾಯದ ಪಾತ್ರವನ್ನು ಗುರುತಿಸಿದೆ.

ಈ ನಿಟ್ಟಿನಲ್ಲಿ ಶಿಕ್ಷಣ ಫೌಂಡೇಶನ್ ವಿದ್ಯಾರ್ಥಿಗಳಲ್ಲಿ ಭಾಗವಹಿಸಲು ಮತ್ತು ನಿರಂತರವಾಗಿ ಹಾಜರಾಗಲು ಪುರಸ್ಕಾರಗಳು ಮತ್ತು ಪ್ರೇರಕಗಳು. ಸಹಪಾಠಿ ಕಲಿಕೆಯಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಕಲಿಕೆಯಲ್ಲಿರುವ ಎಡರು ತೊಡರುಗಳನ್ನು ಸಹಪಾಠಿಗಳೊಂದಿಗೆ ಹಂಚಿಕೊಳ್ಳುವ ನಿರ್ಭಯ ವಾತಾವರಣದ ಅವಕಾಶವಿದ್ದು, ಸಹಪಾಠಿಗಳ ಸಹಾಯದಿಂದ ಕಲಿಕೆ ಸುಲಭವಾಗುತ್ತದೆ. ಕಲಿಕಾ ಪ್ರಯಾಣ ಕಾರ್ಯಕ್ರಮವು ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಕಲಿಕಾ ನಕ್ಷೆಯ ಮೂಲಕ ನೀಡುವುದರಿಂದ ವಿದ್ಯಾರ್ಥಿಗೆ, ಶಿಕ್ಷಕರಿಗೆ ಹಾಗೂ ಪೋಷಕರಿಗೆ ನಿರ್ಧಿಷ್ಠ ಮಾಹಿತಿಯನ್ನು ನೀಡುವಲ್ಲಿ ಸಹಕಾರಿಯಾಗಿದೆ. ಬರೆಯಲು ಆಸಕ್ತಿ ಮೂಡಿಸಿ ಬರೆಯುವ ಕೌಶಲ ಉತ್ತಮಪಡಿಸುವ ನಿಟ್ಟಿನಲ್ಲಿ ಬರವಣಿಗೆ ಅಭ್ಯಾಸ ಪುಸ್ತಕಗಳನ್ನು ಪರಿಚಯಿಸುತ್ತದೆ. ಈ ಅಭ್ಯಾಸ ಪುಸ್ತಕಗಳು ನಿರಂತರವಾಗಿ ಅಭ್ಯಾಸ ಮಾಡಲು ಕಲಿಕಾ ಸಾಮಗ್ರಿಗಳ ಕೊರತೆಯನ್ನು ನೀಗಿಸುತ್ತದೆ ಹಾಗು ಕ್ರಮಬದ್ಧವಾಗಿ ಎಲ್ಲಾ ವಿಷಯಗಳನ್ನು ಅಭ್ಯಸಿಸಲು, ನಿರಂತರವಾಗಿ ಬರೆಯಲು ಪ್ರೋತ್ಸಾಹಿಸುತ್ತದೆ.

ಗಣಿತ ಸಾಮರ್ಥ್ಯಗಳನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಗಣಿತ ಅಭ್ಯಾಸ ಪುಸ್ತಕಗಳ ಮೂಲಕ ರಚನಾತ್ಮಕ ಕಲಿಕೆಯನ್ನು ಪರಿಚಯಿಸುತ್ತದೆ. ಗಣಿತಕ್ಕೆ ಸಂಬAಧಿಸಿದAತೆ ಗಣಿತವನ್ನು ಬೋಧಿಸುವ ಮುಖ್ಯ ಗುರಿಯೆಂದರೆ ಗಣಿತದ ಜ್ಞಾನಕ್ಕಿಂತ (ರೂಢಿಗತ ಮತ್ತು ಯಾಂತ್ರಿಕ ವಿಧಾನಗಳು) ಗಣಿತಾತ್ಮಕವಾಗಿರುವುದು. ಗಣಿತದ ಬೋಧನೆಯು ( ತಾರ್ಕಿಕವಾಗಿ ಆಲೋಚಿಸುವ ಮತ್ತು ತಾತ್ವರ್ಯವನ್ನು ಸೂತ್ರೀಕರಿಸುವ ಸಾಮರ್ಥ್ಯ) ಮಕ್ಕಳ ಆಲೋಚಿಸುವ ಮತ್ತು ಕಾರಣ ಕೊಡುವ, ಅಮೂರ್ತವಾದದ್ದನ್ನು ದೃಢೀಕರಿಸುವ ಹಾಗೂ ನಿಭಾಯಿಸುವ ಸಮಸ್ಯೆಗಳನ್ನು ಸೂತ್ರೀಕರಿಸಿ, ಬಗೆಹರಿಸುವ ಸಾಮರ್ಥ್ಯವನ್ನು ಹೆಚ್ಚಿಸಬೇಕು.

ಈ ದಿಶೆಯಲ್ಲಿ ಶಿಕ್ಷಣ ಫೌಂಡೇಶನ್ ಮಕ್ಕಳಿಗೆ ಗಣಿತದ ಮೂಲ ಕ್ರಿಯೆಗಳಿಗೆ ಮತ್ತು ಅವರ ತರಗತಿಯ ಸಾಮರ್ಥ್ಯಗಳಿಗೆ ಅನುಗುಣವಾಗಿ ಗಣಿತದ ಅಬ್ಯಾಸ ಪುಸ್ತಕಗಳನ್ನು ಪರಿಚಯಿಸುತ್ತದೆ. ಈ ಅಂಶಗಳಿಗೆ ಪೂರಕವಾಗಿ ಶಿಕ್ಷಣ ಫೌಂಡೇಶನ್ ಸಹಕಾರದೊಂದಿಗೆ ಇಲಾಖೆಯ ಕಾರ್ಯಕ್ರಮಗಳಿಗೆ ಸಹಕಾರಿಯಾಗುವ ಪ್ರೇರಣಾತ್ಮಕ ವಿಧಾನಗಳ ತರಬೇತಿ ಸಾಹಿತ್ಯವನ್ನು ರಚಿಸಿದೆ.



 

ಇತ್ತೀಚಿನ ನವೀಕರಣ​ : 29-07-2022 11:16 AM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಚಿತ್ರದುರ್ಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080