ಅಭಿಪ್ರಾಯ / ಸಲಹೆಗಳು

ನಲಿಕಲಿ ಮ್ಯಾಕ್ರೋ ಅಧ್ಯಯನ

ನಲಿಕಲಿ ಮ್ಯಾಕ್ರೋ ಅಧ್ಯಯನ

ಗುಣಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ಅದರಲ್ಲೂ ವಿಶೇಷವಾಗಿ ಪ್ರಾಥಮಿಕ ಶಿಕ್ಷಣದಲ್ಲಿ ನಲಿ-ಕಲಿ ಎಂಬುದು ಒಂದು ಬೋಧನಾ ವಿಧಾನ / ಶೈಕ್ಷಣಿಕ ವ್ಯವಸ್ಥೆ / ಬೋಧನಾ ಕಲಿಕಾ ಪ್ರಕ್ರಿಯೆಯಾಗಿ ಗುರುತಿಸಲ್ಪಟ್ಟಿದೆ.

  • ಈ ಹಿನ್ನಲೆಯಲ್ಲಿ ನಲಿ-ಕಲಿ ವಿಧಾನದ ಅನುಷ್ಟಾನ ಕುರಿತು ಅದರ ವಸ್ತು ಸ್ಥಿತಿಯ ಅಧ್ಯಯನ ನಡೆಸಲು ಇಲಾಖೆಯು ಕ್ರಮವನ್ನು ಕೈಗೊಂಡಿದೆ. ಇದರ ಫಲವಾಗಿ ಪರಿಚಯಿಸಿರುವ ಕಾರ್ಯಕ್ರಮ ಮ್ಯಾಕ್ರೋ ಅಧ್ಯಯನ.
  • ಮ್ಯಾಕ್ರೋ ಅಧ್ಯಯನವು ಸ್ಥೂಲ ಅಧ್ಯಯನವಾಗಿದ್ದು ಇದು ಕಲಿಕಾ ವಾತಾವರಣಕ್ಕೆ ಪೂರಕವಾದ ಅಂಶಗಳಾದ (ಅಕ್ಷರ ಚಪ್ಪರ, ವಾಲ್ ಸ್ಲೇಟ್, ಗುಂಪು ತಟ್ಟೆಗಳು, ಕಾರ್ಡ್ಗಳು, ಪ್ರಗತಿ ನೋಟ, ಅಭ್ಯಾಸ ಪುಸ್ತಕ, ತರಬೇತಾದ ಶಿಕ್ಷಕರಿಂದ ತರಗತಿ ನಿರ್ವಹಣೆ, ಮುಖ್ಯ ಶಿಕ್ಷಕರ ಮಾರ್ಗದರ್ಶನ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ,ಶಿಕ್ಷಣ ಸಂಯೋಜಕರು, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದÀ ಸೂಕ್ತ ಮಾರ್ಗದರ್ಶನ ಲಭ್ಯತೆ, ಅವಕಾಶ ಹಾಗೂ ಬಳಕೆಯ ನೆಲೆಯಲ್ಲಿ ನಡೆದಿರುತ್ತದೆ. ಜೊತೆಗೆ ಶೈಕ್ಷಣಿಕ ಮಾರ್ಗದರ್ಶನದ ಅಂಶವನ್ನು ಒಳಗೊಂಡಿದೆ.

ನಲಿಕಲಿ ಮೈಕ್ರೋ ಅಧ್ಯಯನ

ಗುಣಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ಅದರಲ್ಲೂ ವಿಶೇಷವಾಗಿ ಪ್ರಾಥಮಿಕ ಶಿಕ್ಷಣದಲ್ಲಿ ನಲಿ-ಕಲಿ ಎಂಬುದು ಒಂದು ಬೋಧÀನಾ ವಿಧಾನ / ಶೈಕ್ಷಣಿಕ ವ್ಯವಸ್ಥೆ / ಬೋಧನಾ ಕಲಿಕಾ ಪ್ರಕ್ರಿಯೆಯಾಗಿ ಗುರುತಿಸಲ್ಪಟ್ಟಿದೆ. ಈ ಹಿನ್ನಲೆಯಲ್ಲಿ ನಲಿಕಲಿ ವಿಧಾನದ ಅನುಷ್ಟಾನ ಕುರಿತು ಅದರ ವಸ್ತು ಸ್ಥಿತಿಯ ಅಧ್ಯಯನ ನಡೆಸಲು ಇಲಾಖೆಯು ಕ್ರಮವನ್ನು ಕೈಗೊಂಡಿದೆ. ಇದರ ಫಲವಾಗಿ ಪರಿಚಯಿಸಿರುವ ಕಾರ್ಯಕ್ರಮ ಮೈಕ್ರೋ ಅಧ್ಯಯನ.

ಏನು?

  • ನಲಿಕಲಿ ವಿಧಾನದ ವಸ್ತು ಸ್ಥಿತಿ ಅಧ್ಯಯನದ ಎರಡನೇ ಕಾರ್ಯಕ್ರಮವೇ ಮೈಕ್ರೋ ಅಧ್ಯಯನ.
  • ಮೈಕ್ರೋ ಅಧ್ಯಯನವು ನಲಿಕಲಿ ತರಗತಿಯಲ್ಲಿ ನಡೆಯುವ ಬೋಧನಾ ಕಲಿಕಾ ಪ್ರಕ್ರಿಯೆಯ ಅವಲೋಕನಕ್ಕೆ ಮಾತ್ರ ಸೀಮಿತವಾಗಿದ್ದು, ಬೋಧನಾ ಕಲಿಕಾ ಪ್ರಕ್ರಿಯೆಯನ್ನು ಅತೀ ಸೂಕ್ಷ್ಮವಾಗಿ ಅವಲೋಕಿಸಲಾಗಿದೆ.

ಏಕೆ?

  • ಗುಣಾತ್ಮಕತೆಗಾಗಿ ಶಿಕ್ಷಕರು ಹಾಗೂ ಶೈಕ್ಷಣಿಕ ಮಾರ್ಗದರ್ಶಕರಿಗೆ ಬೋಧನಾ ಕಲಿಕಾ ಪ್ರಕ್ರಿಯೆಯ ಸೂಕ್ಷö್ಮತೆಯನ್ನು ಮನವರಿಕೆ ಮಾಡುವುದು.
  • ಬೋಧನಾ ಕಲಿಕಾ ಪ್ರಕ್ರಿಯೆ ಎಂಬುದು ಚಟುವಟಿಕೆ, ವಿದ್ಯಾರ್ಥಿ, ಶಿಕ್ಷಕ/ಸುಗಮಕಾರ ಹಾಗೂ ಗೆಳೆಯ ಇವರ ಅನೋನ್ಯ ಕ್ರಿಯೆಯಾಗಿರುತ್ತದೆ.
  • ಈ ಅನೋನ್ಯ ಕ್ರಿಯೆಯು ತರಗತಿ ಪ್ರಕ್ರಿಯೆಯಲ್ಲಿ ಒಳಗೊಂಡಿದೆಯೇ? ಅಥವಾ ಇಲ್ಲವೇ? ಎಂಬುದನ್ನು ತಿಳಿಯುವುದಾಗಿದೆ.

 



 

 

ಇತ್ತೀಚಿನ ನವೀಕರಣ​ : 29-07-2022 11:16 AM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಚಿತ್ರದುರ್ಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080